inaugural - annual sports meet 2022-23


Sports is the only path where winning and losing come together

On 19th Nov 2022 St Agnes CBSE school organised the Annual Sports day at St Agnes Special School ground. The invited guests and the parents witnessed the spectacular performance of the students from dedication to perfection as they gave their best. The esteemed dignitaries for the sports meet inaugural were Col Nitteguthu Sharath Bhandary as the Chief Guest who is the President All Karnataka Rubber Planters Association Former President of DK Dist. Ex Serviceman’s Association, Dr. Kumar Nayak President School Welfare Committee, Sr Dr Lydia Fernandes AC the Joint Secretary of the Institutions, Sr Edna Furtado AC the Administrator, Sr Maria Gracilda AC the Principal. A grandeur escort was given to them by the spectacular school band to the venue.

The programme began with melodious opening chorus from the students of grade VI to X singing to the tune of ‘We are unity’ followed by warm words of welcome by Vice Principal Sr Lenita Lobo AC. Then came the spectacular moment of the March Past by students of grade VII to X marching with theme of ‘Five Elements of Nature’. Each class marched with coordination and perfection led by the Captain and Flag bearer. The teams were introduced to the chief guest led by the Head girl Anya D’Souza.

The inaugural of the sports meet was a spectacular moment with the chief guest doing the honours and raising the flag followed by sports minister Shrestha Srinivas reciting the oath followed by declaring the sports meet. The students of grade VI and VII were awarded with various trophies and medals for their excellent performance in various sports events.

The chief guest in his speech congratulated all the students for their spectacular performance. He specially appreciated the school band team for their perfection and grace. Encouraged every student to join the military and provide service to nation. Also stressed the importance of sports and fitness which is the essence of a healthy body. Sr. Dr Lydia Fernandes AC also congratulated all students for their excellent performance. She urged every student to showcase their talents in sports and excel in it. Her words of wisdom brought out an inspiration to the students as they cheered with acknowledgment.

The final matches were held to the teams and thereafter with lowering the flag the morning programme was brought to a closure. The programme was compered by teachers Raina and Kirthi, Vote of thanks was proposed by Sr Sweedal Fernandes AC thanking everyone for their sportive participation.

“ಸೋಲು ಗೆಲುವು ಒಟ್ಟಿಗೆ ಸೇರುವ ಏಕೈಕ ಮಾರ್ಗವೆಂದರೆ ಕ್ರೀಡೆ” ದಿನಾಂಕ 19 ನವೆಂಬರ್ 2022ರಂದು ಸಂತ ಆಗ್ನೆಸ್ ಸಿ. ಬಿ. ಎಸ್. ಸಿ ಶಾಲೆಯು ಸoತ ಆಗ್ನೆಸ್ ವಿಶೇಷ ಶಿಕ್ಷಣ ಆಟದ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ವಿಜ್ರಂಭಣೆಯಿಂದ ಆಚರಿಸಿತು. ಕ್ರೀಡಾಕೂಟದ ಉದ್ಘಾಟನೆಗೆ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿಯವರು ಮುಖ್ಯ ಅತಿಥಿಗಳಾಗಿ ಅವರು ಅಖಿಲ ಕರ್ನಾಟಕ ರಬ್ಬರ್ ಪ್ಲಾಂಟರ್ಸ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ದ.ಕ.ಜಿಲ್ಲೆಯ ಮಾಜಿ ಅಧ್ಯಕ್ಷರು.

ಶಾಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಭಗಿನಿ ಲಿಡಿಯಾ ಫೆರ್ನಾಂಡಿಸ್ ಎ.ಸಿ ಆಡಳಿತಾಧಿಕಾರಿ ಶ್ರೀ ಎಡ್ನಾ ಫರ್ಟಾಡೊ ಎಸಿ, ಪ್ರಾಂಶುಪಾಲರಾದ ಶ್ರೀ ಮರಿಯಾ ಗ್ರೆಸಿಲ್ಡಾ ಎ.ಸಿ ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಕುಮಾರ್ ನಾಯ್ಕ್ ಅವರನ್ನು ಶಾಲಾ ವಾದ್ಯವೃಂದದ ಮೂಲಕ ಸ್ಥಳಕ್ಕೆ ಕರೆದೊಯ್ಯಲಾಯಿತು. ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾಯಿತು. ಏಳರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಪಂಚಭೂತಗಳಾದ ಭೂಮಿ, ವಾಯು ,ಅಗ್ನಿ, ಜಲ ,ಆಕಾಶ ಇವುಗಳನ್ನು ಆಧರಿಸಿ ಪಥಸಂಚಲನ ನಡೆಸಿದರು. ಮುಖ್ಯ ಅತಿಥಿಗಳಾದ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ ಅವರು ಧ್ವಜಾರೋಹಣ ಮಾಡಿ ಕ್ರೀಡಾಕೂಟದ ಪ್ರತಿಷ್ಠೆಯನ್ನು ಗಗನದೆತ್ತರಕ್ಕೆ ಏರಿಸಿದರು. ರಾಷ್ಟ್ರೀಯ ಪಕ್ಷಿಯಾದ ನವಿಲಿನ ನರ್ತನ ಮತ್ತು ಕಾಮನಬಿಲ್ಲಿನ ಏಳು ಬಣ್ಣಗಳನ್ನು ತೋರಿಸುವ ಮೂಲಕ ಸೃಜನಾತ್ಮಕವಾಗಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾ ಪ್ರಮಾಣ ವಚನವನ್ನು ಸ್ವೀಕರಿಸಿದ ನಂತರ ದಳದ ನಾಯಕರು ತಮ್ಮ ದಳವನ್ನು ಮುಖ್ಯ ಅತಿಥಿಗಳಿಗೆ ಪರಿಚಯಿಸಿದರು. ಶಾಲಾ ವಾದ್ಯ ವೃoದದ ಸದಸ್ಯರು ಮತ್ತು ಶಾಲೆಯು ಏರ್ಪಡಿಸಿದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 6 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳು ತಮ್ಮ ಸಂದೇಶದಲ್ಲಿ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಕ್ರೀಡೆಗೆ ಮಹತ್ವ ನೀಡಿ ಒಳ್ಳೆಯ ಆರೋಗ್ಯವಂತ ವ್ಯಕ್ತಿಗಳಾಗಿ ಬದುಕಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಮತ್ತು ಕ್ರೀಡಾಕೂಟದ ಘೋಷಣೆಯನ್ನು ಮಾಡಿದರು. ಕ್ರೀಡಾಕೂಟದ ಅಂಗವಾಗಿ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಗಳನ್ನು ಆಡಿಸಲಾಯಿತು. ಕ್ರೀಡಾಕೂಟಕ್ಕೆ ಭಗಿನಿ ಲೆನಿಟ ಲೋಬೊ ಎ.ಸಿ ಸ್ವಾಗತಿಸಿ, ಭಗಿನಿ ಸ್ವೀಡಲ್ ಫೆರ್ನಾಂಡಿಸ್ ಎ. ಸಿ ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿಯರಾದ ಶ್ರೀಮತಿ ರೈನ ಕುವೆಲ್ಲೋ ಮತ್ತು ಶ್ರೀಮತಿ ಕೀರ್ತಿ ಫೆರ್ನಾಂಡಿಸ್ ಅವರು ನಡೆಸಿಕೊಟ್ಟರು.


Media Link's


School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech