guides summer camp


I serve and inspire others to serve.

A three-day summer camp was organised to the guides of St Agnes CBSE school. Around 80 students along with their guide captains participated in the camp on 1st to 3rd April 2023. The guides were divided into seven teams of Rose, Lilly, Tulip, Lotus, Jasmine, Sunflower, and Lavender. The camp was inaugurated by Sr. Maria Gracilda AC the school Principal. The inaugural was followed by Prayer service, Flag Hoisting ceremony with guides anthem and claps.

The first part of the day was a session to the guides by Ms Felcy Fernandes on various activities to be done as guides, the step-by-step learning on important rules and pattern to be followed by every guide, tying different knots, action song, flag hoisting etc were skills taught. Post lunch the guides participated in various outdoor games and as the day one came to closure the students refreshed themselves with preparation for further activities. During the night, activities of Collage making was given to teams on Swatch Bharat, Cooking without fire, memory games were conducted meticulously.

On the second day the guides were taken to hiking at Mundana in Bejai. Some activities such as Patriotic singing, different claps and instant advertisement were some competitions held. The next day the guides were taken to Ullal beach as part of beach cleaning initiative.

The campfire was a grand event with guests being the School Principal Sr Maria Gracilda AC, the Administrator Sr. Edna Furtado AC, Vice Principal Sr Lenita Lobo AC and some invited sisters of the St Agnes convent and teachers. The campfire was inaugurated by the Principal with guide student captain expressed their vows from each direction and lit the fire. A small entertainment programme was put up by the girl guides such as motivational skit, dance, advertisement, songs, mime show etc. The school principal shared her thoughts on service and importance of girl guide and the motto of being a fair candidate and giving the best to society. The camp was followed by dinner and rest. Prizes were distributed to the teams who secured highest points in all activities. It was an informative and relaxing camp for the guides. The event was a success with the planning and preparation of teachers Devika, Babitha, Madhura, Chandrika, Deekshitha Manisha, and Sumitra.

The management congratulates the guides for their active participation and learning and the guide captains for their timely training given to the guides and preparing them for future.

ಸoತ ಆಗ್ನೆಸ್ ಸಿ.ಬಿ.ಎಸ್.ಇ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳಿಗೆ ಮೂರು ದಿನಗಳ ಗೈಡ್ಸ್ ಶಿಬಿರವನ್ನು ಆಯೋಜಿಸಲಾಗಿದೆ. ಏಪ್ರಿಲ್ 1 ರಿಂದ 3 ರವರೆಗೆ ನಡೆದ ಶಿಬಿರದಲ್ಲಿ ಸುಮಾರು 80 ವಿದ್ಯಾರ್ಥಿಗಳು ತಮ್ಮ ಗೈಡ್ ಕ್ಯಾಪ್ಟನ್‌ಗಳೊಂದಿಗೆ ಭಾಗವಹಿಸಿದ್ದರು. ಗೈಡ್ ವಿದ್ಯಾರ್ಥಿಗಳನ್ನು ಗುಲಾಬಿ, ಲಿಲ್ಲಿ, ಟುಲಿಪ್, ಲೋಟಸ್, ಜಾಸ್ಮಿನ್, ಸನ್‌ಫ್ಲವರ್ ಮತ್ತು ಲ್ಯಾವೆಂಡರ್‌ಗಳ ಏಳು ತಂಡಗಳಾಗಿ ವಿಂಗಡಿಸಲಾಗಿದೆ. ಗೈಡ್ಸ್ ಶಿಬಿರವು ಪ್ರಾರ್ಥನಾ ಗೀತೆ, ಧ್ವಜ ಗೀತೆ ಮತ್ತು ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ನಂತರ ಗೈಡ್ ನಾಯಕರುಗಳು ವಿದ್ಯಾರ್ಥಿಗಳನ್ನು ಬಿಜೈನ ಮುಂಡಾನಾದಲ್ಲಿ ಪಾದಯಾತ್ರೆ ಮಾಡುವ ಮೂಲಕ ಕದ್ರಿ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಚಪ್ಪಾಳೆ , ಜಾಹೀರಾತು, ದೇಶಭಕ್ತಿ ಗೀತೆಯಂತಹ ಕೆಲವು ಚಟುವಟಿಕೆಗಳನ್ನು ನಡೆಸಲಾಯಿತು. ಶಿಬಿರದ ಎರಡನೇ ದಿನದಲ್ಲಿ ಶ್ರೀಮತಿ ಫೆಲ್ಸಿ ಫೆರ್ನಾಂಡಿಸ್ ಅವರು ಗೈಡ್ ವಿದ್ಯಾರ್ಥಿಗಳು ಮಾಡಬೇಕಾದ ವಿವಿಧ ಚಟುವಟಿಕೆಗಳು ಮತ್ತು ಹಂತ-ಹಂತದ ಕಲಿಕೆ, ವಿಭಿನ್ನ ಗಂಟುಗಳನ್ನು ಕಟ್ಟುವುದು, ಅಭಿನಯ ಗೀತೆ ಇತ್ಯಾದಿ ಕೌಶಲ್ಯಗಳನ್ನು ಕಲಿಸಲಾಯಿತು. ಊಟದ ನಂತರ ಗೈಡ್ಸ್ ನಾಯಕರು ಗೈಡ್ ವಿದ್ಯಾರ್ಥಿಗಳನ್ನು ವಿವಿಧ ಹೊರಾಂಗಣ ಆಟಗಳಲ್ಲಿ ಪಾಲ್ಗೊಳಿಸಿದರು ಮತ್ತು ಮುಂದಿನ ಚಟುವಟಿಕೆಗಳಿಗೆ ತಯಾರಿ ನಡೆಸುವುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ರಾತ್ರಿಯಲ್ಲಿ ಸ್ವಚ್ ಭಾರತ್ ಕುರಿತು ತಂಡಗಳಿಗೆ ಕೊಲಾಜ್ ತಯಾರಿಕೆಯ ಚಟುವಟಿಕೆಗಳನ್ನು ನೀಡಲಾಯಿತು, ಬೆಂಕಿಯಿಲ್ಲದ ಅಡುಗೆ, ಮೆಮೊರಿ ಆಟಗಳನ್ನು ನಡೆಸಲಾಯಿತು.ಶಾಲಾ ಪ್ರಾಂಶುಪಾಲರಾದ ಭಗಿನಿ ಮರಿಯ ಗ್ರೆಸಿಲ್ಡಾ ಎ.ಸಿ, ಆಡಳಿತಾಧಿಕಾರಿ ಭಗಿನಿ ಎಡ್ನಾ ಫುರ್ಟಾಡೊ ಎ.ಸಿ, ಉಪ ಪ್ರಾಂಶುಪಾಲರಾದ ಲೆನಿಟಾ ಲೋಬೊ ಎ.ಸಿ ಮತ್ತು ಸಂತ ಆಗ್ನೆಸ್ ಕಾನ್ವೆಂಟ್‌ನ ಕೆಲವು ಆಹ್ವಾನಿತ ಭಗಿನಿಯರು ಮತ್ತು ಗೈಡ್ಸ್ ಶಿಕ್ಷಕರೊಂದಿಗೆ ಕ್ಯಾಂಪ್‌ಫೈರ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಿಬಿರದ ಉದ್ಘಾಟನೆಯನ್ನು ಪ್ರಾಂಶುಪಾಲರು ಮತ್ತು ನಾಲ್ಕು ವಿದ್ಯಾರ್ಥಿಗಳು ನಾಲ್ಕು ದಿಕ್ಕಿನಿಂದ ಬರುವ ಮೂಲಕ ತಮ್ಮ ಪ್ರತಿಜ್ಞಾವಿಧಿಯನ್ನು ವ್ಯಕ್ತಪಡಿಸಿ ಬೆಂಕಿಯನ್ನು ಬೆಳಗಿಸಿದರು.ಗೈಡ್ ವಿದ್ಯಾರ್ಥಿಗಳಿಂದ ಪ್ರೇರಕ ಕಿರುನಾಟಕ, ನೃತ್ಯ, ಜಾಹೀರಾತು, ಹಾಡುಗಳು, ಮೈಮ್ ಶೋ ಮುಂತಾದ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಭಗಿನಿ ಮರಿಯ ಗ್ರೆಸಿಲ್ಡಾ ಎ.ಸಿ ಅವರು ತಮ್ಮ ಸಂದೇಶದಲ್ಲಿ ಬೆಂಕಿ ಹೇಗೆ ಉರಿದು ಜಗತ್ತಿಗೆ ಬೆಳಕನ್ನು ನೀಡುತ್ತದೆಯೋ ಹಾಗೆಯೇ ನೀವು ನಿಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಲು ಕರೆ ನೀಡಿದರು. ಎಲ್ಲಾ ಚಟುವಟಿಕೆಗಳಲ್ಲಿ ಹೆಚ್ಚು ಅಂಕ ಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮೂರನೇ ದಿನದ ಬೆಳಗಿನ ಜಾವದಲ್ಲಿ ಯೋಗ ಅಭ್ಯಾಸ ಮಾಡಿ ನಂತರ ಬೀಚ್ ಸ್ವಚ್ಛತೆಗಾಗಿ ಉಳ್ಳಾಲಕ್ಕೆ ಹೋಗಲಾಯಿತು. ದಳದ ಮುಖ್ಯಸ್ಥರಾದ ಶಿಕ್ಷಕಿರಾದ ದೇವಿಕಾ, ಬಬಿತಾ, ಮಧುರಾ, ಚಂದ್ರಿಕಾ, ದೀಕ್ಷಿತಾ ಮನಿಷಾ, ಮತ್ತು ಸುಮಿತ್ರಾ ಅವರ ಯೋಜನೆ ಮತ್ತು ಸಿದ್ಧತೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.

Hard work always comes with reward.


Media Link's


School Fees Online



Parent Login



About St. Agnes



Print



St. Agnes School Bendore, Mangaluru - 575002,

Phone:0824-2218233 Mail:stagnesmangalore@gmail.com


St. Agnes School © 2021, ALL Rights Reserved | Designed By Hash Infotech