Celebrates Cords meo, qui comites-Heart that counts.

"A good heart is something that people are attracted to".

World Heart Day is observed and celebrated annually on September 29 with the aim of increasing awareness of cardiovascular diseases and how to control them to negate their global impact. In 1999 the World Heart Federation in conjunction with the World Heart Organisation announced the establishment of World Heart Day. The idea for this annual event was conceived by Anton Bayes De Luna, president of WHF from 1997 to 1999.

Cardiovascular diseases include heart conditions consisting of blood clots, diseased vessels and structural problems of the heart.

The main causes of cardiovascular diseases are modified factors which include lack of exercise, smoking and poor diet. Economic systems of countries are also majorly impacted by cardiovascular diseases - the cost of treatment is high and failure to treat the diseases timeously result in loss of productivity and long absences from work.

More than 90 countries take part in this international observance every year. As a result, world heart day has proven to be an effective means for disseminating information about CVD. The high level of involvement from governments and organisations is most important for developing countries which are heavily affected by these diseases.

To ensure a healthy heart one has to start early. Keeping this in mind St. Agnes CBSE School celebrated the World Heart Day wherein students were encouraged to participate in different activities virtually. The importance of being in good health by leading a healthy and energetic life was reinforced. This helped the students to take steps to protect their own heart and share healthy habits with their family and friends to protect their hearts too. Also encouraged them to be sensitive towards family and others and not to break anyone's heart with rude behaviour and action. The following list of activities conducted to the students. 

One who competes in a competition is already a winner. Here is the list of winners. 

The Management, the Administrator, Principal and the Staff congratulate all the winners for their best efforts. This event was organised by teachers Mrs Sumitra and Ms. Sarida.

On World Heart Day, make a promise that you will say 'No' to all those things that can cause damage to one's heart.
Let us celebrate World Heart Day by going for heart check-ups and promising ourselves to live a healthy and happy life.

A healthy heart is a key to happiness in life.


ಸಂತ ಆಗ್ನೆಸ್ ಶಾಲೆಯಲ್ಲಿ ‘ವಿಶ್ವ ಹೃದಯ ದಿನಾಚರಣೆ’

ಹೃದಯ ಬಡಿತ ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವಕ್ಕೆ ಸಾಕ್ಷಿ. ಅದು ಜೀವಂತಿಕೆಯ, ನಿರಂತರತೆಯ ಪುರಾವೆಯೂ ಹೌದು. ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು, ವಿಶ್ವ ಹೃದಯ ಸಂಸ್ಥೆಯು (Wಊಈ) ‘ವಿಶ್ವ ಹೃದಯ ದಿನ’ವನ್ನು ಆಚರಿಸುವುದರ ನಿರ್ಧಾರ ಕೈಗೊಂಡ ಬಳಿಕ ವಿಶ್ವದಾದ್ಯಂತ ಸೆಪ್ಟೆಂಬರ್ 29ರಂದು ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಡುವುದು ಹಾಗೂ ಅವುಗಳು ಬರದಂತೆ ಜಾಗೃತಿ ವಹಿಸುವುದು ಹೇಗೆಂದು ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡುವ ಕಾರ್ಯ ಈ ಸಂಸ್ಥೆಯ ಮುಖೇನ ಸಾಗುತ್ತಲಿದೆ . ಕೆಲಸದ ಒತ್ತಡ, ಧೂಮಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ವಾಯುಮಾಲಿನ್ಯ, ನಿದ್ರಾಹೀನತೆ, ತಂಬಾಕು, ಅನಿಯಮಿತ ಆಹಾರ ಹೀಗೆ ನಾನಾ ಕಾರಣಗಳಿಂದಾಗಿ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ವ್ಯಾಯಾಮ, ನಡಿಗೆ, ಓಟ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ಕುರಿತಾದ ಅಣಕು ಪ್ರದರ್ಶನಗಳನ್ನು ನಡೆಸಿ, ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಇದರ ಪ್ರಯುಕ್ತ ಮಂಗಳೂರಿನ ಸಂತ ಆಗ್ನೆಸ್ ಸಿಬಿಎಸ್ಇ ಶಾಲೆಯಲ್ಲಿ ‘ವಿಶ್ವ ಹೃದಯ ದಿನಾಚರಣೆ’ಯನ್ನು ಆಚರಿಸಿ, ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಹಾಗೂ ಹೃದಯದ ಸ್ವಾಸ್ಥ್ಯ ಉತ್ತಮಗೊಳಿಸಲು ಪಾಲಿಸಬಹುದಾದ ಅಂಶಗಳ ಕುರಿತು ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ , ಹೃದಯ ಸಂಬಂಧಿ ಕಾಯಿಲೆಗಳು ಉಂಟುಮಾಡುವ ಅನಾನುಕೂಲತೆಗಳ ಕುರಿತು ಮನವರಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಯೋಗ, ವ್ಯಾಯಾಮ, ನಿಯಮಬದ್ಧ ಪೌಷ್ಟಿಕ ಆಹಾರ ಸೇವನೆ, ಸರಿಯಾದ ನಿದ್ರಾಕ್ರಮ ಇವೆಲ್ಲವುಗಳಿಂದ ನಮ್ಮ ಹಾಗೂ ನಮ್ಮ ಪ್ರೀತಿಪಾತ್ರರ ಹೃದಯದ ಆರೋಗ್ಯವನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಲು ಪ್ರೇರೇಪಿಸಲಾಯಿತು. ಶಾಲಾ ಆಡಳಿತ ಅಧಿಕಾರಿಣಿಯವರಾದ ಭ. ಎಡ್ನ ಪುರ್ಟಡೊ, ಪ್ರಾಂಶುಪಾಲರಾದ ಭ. ಮರಿಯ ಗ್ರೆಸಿಲ್ಡ ರವರ ಸಹಯೋಗದೊಂದಿಗೆ ಶಿಕ್ಷಕಿ ಸರಿಡ ಹಾಗೂ ಸುಮಿತ್ರ ಈ ಕಾರ್ಯಕ್ರಮದ ರೂವಾರಿಗಳಾಗಿದ್ದರು.

ನಮ್ಮ ಆರೋಗ್ಯ ನಮ್ಮ ಆಸ್ತಿ. ಸುಂದರ ಜಗತ್ತಿನಲ್ಲಿ ಸ್ವಾಸ್ಥ್ಯ ಭರಿತ ಜೀವನ ನಮ್ಮದಾಗಲಿ ಎಂದು ಹಾರೈಸುತ್ತಾ, ಸರ್ವರಿಗೂ ವಿಶ್ವ ಹೃದಯ ದಿನಾಚರಣೆಯ ಶುಭಾಶಯಗಳು. 

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]