ಸಂತ ಆಗ್ನೇಸ್ ಸಿ.ಬಿ.ಎಸ್.ಇ ಶಾಲೆಯ ವಾರ್ಷಿಕ ಕ್ರೀಡೊತ್ಸವವು ಶಾಲಾ ಮೈದಾನದಲ್ಲಿ ದಿನಾಂಕ 17.11.18 ರಂದು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಕದ್ರಿ ಪೊಲೀಸ್ ಠಾಣೆಯ ಸಹಾಯಕ್ ಇನ್ ಸ್ಪೆಕ್ಟರ್ ಆಗಿರುವ ಶ್ರೀ ಸಂತೋಷ್ ಕುಮಾರ್ ಕೆ ರವರು ಆಗಮಿಸಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಅದನ್ನು ತಡೆಯುವ ಅವಶ್ಯಕತೆ ಇದೆ. ಹೆತ್ತವರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ಮನೋಧೈರ ್ಯವನ್ನು ತುಂಬಿ ಕ್ರೀಡೆ ಹಾಗೂ ಯೋಗ ಇಂಥಹ ವಿಷಯಗಳತ್ತ ವಾಲುವಂತೆ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. ಕ್ರೀಡೋತ್ಸವವು ಆಕರ್ಷಕ ಪಥಸಂಚಲನ ಹಾಗೂ ವಿವಿಧ ಕ್ರೀಡೆಗಳನ್ನು ಒಳಗೊಂಡಿತ್ತು. ಶಾಲಾ ಜಂಟಿಕಾರ್ಯದರ್ಶಿಯವರಾದ ಭಗಿನಿ ಡಾ. ಮರಿಯ ರೂಪ, ಪ್ರಾಂಶುಪಾಲರಾದ ಭಗಿನಿ ಜ್ಯೋತಿ ಸಲ್ದಾನಾ ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಗ್ರೆಸಿಲ್ಲಾ ಇವರು ನಿರೂಪಿಸಿ, ಭಗಿನಿ ಜ್ಯೋತಿ ಸಲ್ದಾನಾ ಇವರು ಬಂದ ಅತಿಥಿಗಳನ್ನು ಸ್ವಾಗತಿಸಿದರು, ಶಿಕ್ಷಕಿ ಪರ್ಲ್ ಇವರು ಬೆಳಗಿನ ಕಾರ್ಯಕ್ರಮದ ವಂದನಾರ್ಪನೆ ಸಲ್ಲಿಸಿದರು.


ಭಗಿನಿ ಡಾ. ಮರಿಯ ರೂಪ ಇವರು ಸಮಾರೋಪ ಸಮಾರಂಭವನ್ನು ನೆರವೇರಿಸಿ, ಶ್ರೀಮತಿ ವಿಲ್ಮಾ ಇವರು ವಂದನಾರ್ಪನೆ ಸಲ್ಲಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

HomeAbout | NewsSitemap| Contact

Copyright ©2018 www.agnesschoolmangalore.in. Powered by eCreators

sound byJbgmusic

Contact Us

St. Agnes School
Bendore
Mangaluru - 575002

Phone:0824-2218233

Mail:[email protected]